GOVT HIGH SCHOOL MOODAMBAIL
MOODAMBAIL POST
MANJESHWARA TALUK
KASARAGOD DISTRICT-PIN:671323
KERALA STATE
INDIA
Phone:+918848241998
MOODAMBAIL POST
MANJESHWARA TALUK
KASARAGOD DISTRICT-PIN:671323
KERALA STATE
INDIA
Phone:+918848241998
Our Faculties | Phone Number | |
Teaching Staff | ||
Dayavathi Saliyan | HST Kannada | 9895592821 |
Joy M | HSTHindi | 9645101074 |
Anvi D Das | HST Soc.Science | 9846814241 |
Niveditha O | HST Mathematics | 9633524733 |
Mohini B K | LPST | 9497128879 |
Moidin Lathif T | LPST | 7012016841 |
Rahana B.A | LPST | 7510187741 |
Priya C H | UPST | 9746532662 |
Bushra P | UPST | 9567135058 |
Non Teaching Staff | ||
George Crasta CH | Headmaster | 8848241998 |
Abhilash V | Clerk | 8848819978 |
SHINY T G | Office Attendant | 9562929887 |
SHAFEEKH M K | Office Attendant | 9747695410 |
HAROON B M | FTM | 9995626978 |
ಸರಕಾರಿ ಪ್ರೌಢ ಶಾಲೆ, ಮೂಡಂಬೈಲು "ಅಮೃತ ಮಹೋತ್ಸವ ಸಂಭ್ರಮಾಚರಣೆ" ಯ ಹೊಸ್ತಿಲಲ್ಲಿ
ReplyDelete೧೯೨೪ ರಲ್ಲಿ ಪ್ರಾರಂಭವಾದ ನಮ್ಮ ಸರಕಾರಿ ಪ್ರೌಢ ಶಾಲೆ, ಮೂಡಂಬೈಲು ಅಮೃತ ಮಹೋತ್ಸವ ಸಂಭ್ರಮಾಚರಣೆಯ ಶುಭ ನಿರೀಕ್ಷೆ ಯಲ್ಲಿರುವ ವಿಚಾರ ತಿಳಿಸಲು ಹೆಮ್ಮೆ ಪಡುತ್ತಿದ್ದೇವೆ. ಈ ಶಾಲೆಯು ಸಾವಿರಾರು ವಿದ್ಯಾರ್ಥಿಗಳನ್ನು ಸಮಾಜದ ಉತ್ತಮ ಪ್ರಜೆಗಳನ್ನಾಗಿ ರೂಪಿಸಿದೆ. ಇಲ್ಲಿ ಕಲಿತಿರುವ ವಿದ್ಯಾರ್ಥಿಗಳು ದೇಶ ವಿದೇಶಗಳಲ್ಲಿ ವಿವಿಧ ಹುದ್ದೆಗಳಲ್ಲಿ ದುಡಿಯುತ್ತಿದ್ದು ಇದು ಶಾಲೆಗೆ ಹೆಮ್ಮೆಯ ಸಂಗತಿ.
ಈ ಸಂಭ್ರಮಾಚರಣೆಯು ಶಾಲೆ ಮತ್ತು ಅದರ ಹಿರಿಯ ವಿದ್ಯಾರ್ಥಿಗಳು ಹಾಗೂ ಸಮಾಜಕ್ಕೆ ಒಂದು ಶುಭ ಸಂದರ್ಭವಾಗಿದೆ. ಈ ಹರುಷವನ್ನು ಸ್ಮರಣೀಯಗೊಳಿಸಲು ಎಲ್ಲಾ ಹಳೆಯ ವಿದ್ಯಾರ್ಥಿಗಳು, ಹೆತ್ತವರು, ಶಾಲಾ ಅಭಿಮಾನಿಗಳು,ಹಿತೈಷಿಗಳು, ವಿವಿಧ ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರು ಸಂಭ್ರಮಾಚರಣೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ ವಿವಿಧ ಕಾರ್ಯಕ್ರಮಗಳನ್ನು ಸಂಘಟಿಸಲು ಮತ್ತು ನಿರ್ವಹಿಸಲು ಸಮಿತಿ ರಚನೆಯಲ್ಲಿ ನೆರವಾಗುವಂತೆ ಈ ಮೂಲಕ ಆಮಂತ್ರಿಸುತ್ತಿದ್ದೇವೆ.
ಅಕ್ಟೋಬರ್ 20 ರಂದು ರವಿವಾರ ಅಪರಾಹ್ನ 3.00ಕ್ಕೆ ಶಾಲಾ ಸಭಾಂಗಣದಲ್ಲಿ ನಡೆಯುವ ಈ ಸಭೆಯಲ್ಲಿ ತಾವೆಲ್ಲರೂ ಅಗತ್ಯ ಹಾಜರಿದ್ದು ಶತಮಾನೋತ್ಸವವನ್ನು ಅವಿಸ್ಮರಣೀಯಗೊಳಿಸಲು ತಮ್ಮೆಲ್ಲರ ಸಹಕಾರವನ್ನು ಕೋರುತ್ತೇವೆ.
ಮುಖ್ಯಾಂಶಗಳು:
ಸಮೃದ್ಧ ಇತಿಹಾಸ:
ಶಾಲೆಯು 100 ವರ್ಷಗಳ ಸಮೃದ್ಧ ಇತಿಹಾಸವನ್ನು ಹೊಂದಿದೆ. ಇದು ಅನೇಕ ಪೀಳಿಗೆಯ ವಿದ್ಯಾರ್ಥಿಗಳ ಶಿಕ್ಷಣವನ್ನು ರೂಪಿಸುವಲ್ಲಿ ಮತ್ತು ಸಮಾಜದ ಅಭಿವೃದ್ಧಿಗೆ ಕೊಡುಗೆ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ.
ಸಮುದಾಯದ ಪಾತ್ರ:
ಸಂಭ್ರಮಾಚರಣೆಯು ಸಮಾಜವು ಒಂದಾಗಿ ಮತ್ತು ಶಾಲೆಯ ಸಾಧನೆಗಳನ್ನು ಪರಿಚಯಿಸಿ ಸಂಭ್ರಮಿಸಲು ಒಂದು ಅವಕಾಶವಾಗಿದೆ. ಇದು ಹಳೆಯ ಸ್ನೇಹಿತರು ಮತ್ತು ಶಿಕ್ಷಿತ ಸಮಾಜದ ಎಲ್ಲರೊಂದಿಗೆ ಮರು ಸಂಪರ್ಕ ಏರ್ಪಡಿಸಲೂ ಕೂಡ ಒಂದು ಅವಕಾಶವಾಗಿದೆ.
ಸಮಿತಿ ರಚನೆ:
ಸಮಿತಿಯು ಸಂಭ್ರಮಾಚರಣೆಯನ್ನು ಆಯೋಜಿಸಲು ಪ್ರಮುಖ ಪಾತ್ರ ವಹಿಸುತ್ತದೆ. ಹಾಗಾಗಿ ನಿಮ್ಮ ಭಾಗವಹಿಸುವಿಕೆಯು ಸಂಭ್ರಮವನ್ನು ಯಶಸ್ವಿಗೊಳಿಸಲು ಮತ್ತು ಸ್ಮರಣೀಯವಾಗಿಸುವುದನ್ನು ಖಚಿತಪಡಿಸಲು ಸಹಾಯ ಮಾಡುತ್ತದೆ.
ವಿವಿಧ ಕಾರ್ಯಕ್ರಮಗಳು: ಸಾಂಸ್ಕೃತಿಕ ಕಾರ್ಯಕ್ರಮಗಳು, ಕ್ರೀಡಾ ಸ್ಪರ್ಧೆಗಳು, ಹಳೆಯ ವಿದ್ಯಾರ್ಥಿ ಸಮ್ಮಿಲನ ಮತ್ತು ಅವಿಸ್ಮರಣೀಯವಾಗುವಂಥ ವಿವಿಧ ಕಾರ್ಯಕ್ರಮಗಳನ್ನು ಒಳಗೊಂಡಿರುತ್ತದೆ.
ವಿದ್ಯಾರ್ಥಿಗಳಿಗೆ ,ಹೆತ್ತವರಿಗೆ ಊರವರಿಗೆ ವಿವಿಧ ಚಟುವಟಿಕೆಗಳು ಮತ್ತು ಸಮ್ಮೇಳನಗಳನ್ನು ಒಳಗೊಂಡಿರುತ್ತದೆ.
ಈ ಉತ್ಸವದಲ್ಲಿ ಭಾಗವಹಿಸುವ ಮೂಲಕ, ನೀವು ಶಾಲೆಗೆ ಅಮೂಲ್ಯ ಕೊಡುಗೆ ನೀಡುತ್ತೀರಿ ಮತ್ತು ಅದರ ಇತಿಹಾಸವನ್ನು ಮುಂದಿನ ಪೀಳಿಗೆಗೆ ಸಂರಕ್ಷಿಸುವಂತೆ ಮಾಡುತ್ತೀರಿ ಎನ್ನುವ ಆಶಾವಾದದೊಂದಿಗೆ ನಿಮ್ಮನ್ನು ವಿನಯ ಪೂರ್ವಕವಾಗಿ ಆಮಂತ್ರಿಸುವ.
ಶಾಲಾ ಮುಖೋಪಾಧ್ಯಾಯರು ಮತ್ತು ಪ್ರಾಧ್ಯಾಪಕರು
ಪಿ ಟೀ ಎ, ಹಳೆವಿಧ್ಯಾರ್ಥಿ ಸಂಘ, ಶಾಲಾ ಬೆಂಬಲ ಸಮಿತಿ.
"ನಮ್ಮ ಜೀವನವನ್ನು ರೂಪಿಸಿದ ಶಾಲೆಗೆ ಯಥಾಶಕ್ತಿ ಸೇವೆ ಮಾಡೋಣ ಬನ್ನಿ,ಜೊತೆಯಾಗಿ ಭಾಗವಹಿಸಿ."
ದಿನಾಂಕ: 20-10-2024 ಸಮಯ: ಅಪರಾಹ್ನ 3:00